Thursday, December 25, 2008

ಚೆಲುವೆಯೇ ನಿನ್ನ ನೋಡಲು.,

ಚೆಲುವೆಯೇ ನಿನ್ನ ನೋಡಲು
ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ
ಹಾಡುವ ನೋಡಿ ಅಂದವನು.,

ನೀ ನಗುತಿರೆ ಹೂವು ಅರಳುವುದು
ನೀ ನಡೆದರೆ ಲತೆಯು ಬಳುಕುವುದು
ಪ್ರೇಮಗೀತೆ ಹಾಡಿದಾಗ
ಕೋಗಿಲೆ ಕೂಡ ನಾಚುವುದು.,

ಈ ಸಂತಸ ಎಂದೂ ಹೀಗೆ ಇರಲಿ
ಈ ಸಂಭ್ರಮ ಸುಖವ ತುಂಬುತ ಬರಲಿ
ಪನಿಸರಿ ಪನಿ ಪನಿ ಸನಿ ದಪ

ನಿಸ ಮಾ ಪದ ..,
ಇಂದು ಬಂದ ಹೊಸ ವಸಂತ
ಕನಸುಗಳ ನನಸಾಗಿಸಲಿ